ಹೇಮಾವತಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೮ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಸಿಂಹಾರವಮ್ಅಥವಾ ದೇಸಿ ಸಿಂಹಾರವಮ್ ಎಂದು ಹೆಸರಿಸಿದ್ದಾರೆ. ಇದು ನಾಗಸ್ವರ ವಾದನಕ್ಕೆ ಅತ್ಯಂತ ಅನುಕೂಲವಾದ ರಾಗ. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹತ್ತನೆಯ ದಿಸಿ ಚಕ್ರದ ನಾಲ್ಕನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಭೂ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧಿ ನಿ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೨ ಪ ದ೨ ನಿ೨ ಸ ಅವರೋಹಣ ಸ ನಿ೨ ದ೨ ಪ ಮ೨ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು ೨೨ನೆಯ ಮೇಳಕರ್ತ ರಾಗವಾದ ಖರಹರಪ್ರಿಯ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. == ಜನಪ್ರಿಯ ರಚನೆಗಳು == ಶ್ರೀ ಕಾಂತಿಮತಿಮ್,ಹರಿಯುವತೀಮ್ ಹೈಮವತಿಮ್ ಮತ್ತು ಮಧುರಾಂಬಿಕಾಯಮ್- ಮುತ್ತುಸ್ವಾಮಿ ದೀಕ್ಷಿತ ಇಕಾ ತಳನೇನುರ ಇನಾ- ಎಸ್.ರಾಮನಾಥನ್ ಎನ್ನೈ ಕಾತರುಲ್‍ವತು,ಪರಿಪಾಲನೈ- ಪಾಪನಾಶಂ ಶಿವನ್ ಮಂತ್ರಿಣಿ ಮಾತಂಗ - ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರ್ ನೀಸರಿಸಾತಿ- ತ್ಯಾಗರಾಜ ನೀ ಪಾದ ಸರಸ ರಾತುಲಕು- ನಲ್ಲಚಕ್ರವರ್ತುಲ ಕೃಷ್ಣಮಾಚಾರ್ಯಲು == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ಹೇಮಾವತಿ ರಾಗಕ್ಕೆ ಅನ್ವಯಿಸಿದಾಗ ಮೂರು ರಾಗಗಳು ದೊರೆಯುತ್ತದೆ.ಅವುಗಳು ಕೀರ್ವಾಣಿ,ಕೋಸಲ ಮತ್ತು ವಕುಲಾಭರಣ == ಉಲ್ಲೇಖಗಳು ==